: ನಾಗಸಂದ್ರ-ಮಾದವಾರ ನಡುವೆ 6 ಬೋಗಿ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ ರೀಚ್ 3ಸಿ ವಿಸ್ತ್ರತ ಮಾರ್ಗದ ಮಾದವರ ಮತ್ತು ನಾಗಸಂದ್ರ ನಡುವೆ ಮೊದಲ ಪರೀಕ್ಷಾರ್ಥ ಸಂಚಾರ ನಡೆಸಲಾಗುತ್ತಿದೆ. ಬೆಂಗಳೂರು: ನಮ್ಮ ಮೆಟ್ರೋ ನಾಗಸಂದ್ರ - ಮಾದಾವರ ನಡುವೆ ಪ್ರಾಯೋಗಿಕ ಸಂಚಾರ ಆರಂಭಿಸಿದ್ದು, ಭಾನುವಾರ ಬೆಳಿಗ್ಗೆ 6 ಬೋಗಿಗಳ ರೈಲು ನಿಲ್ದಾಣಕ್ಕೆ ಆಗಮಿಸಿ ಸಿಗ್ನಲ್‌ ಪರೀಕ್ಷೆ ನಡೆಸಿದವು.ಹೌದು.. ನಮ್ಮ ಮೆಟ್ರೋ ಹಸಿರು ಮಾರ್ಗ ವಿಸ್ತರಣೆಯಾಗುತ್ತಿದ್ದು, ಸದ್ಯ ರೇಷ್ಮೆ ಮಂಡಳಿಯಿಂದ ನಾಗಸಂದ್ರವರೆಗೂ ಮಾರ್ಗ ವಿಸ್ತರಣೆಯಾಗಿದೆ.ಈ ಮಾರ್ಗವನ್ನು ರೇಷ್ಮೆ ಮಂಡಳಿಯಿಂದ ಮಾದಾವರ (ಬೆಂಗಳೂರು ಅಂತಾರಾಷ್ಟ್ರೀ ವಸ್ತು ಪ್ರದರ್ಶನ ಮೈದಾನ) ವರೆಗೂ ವಿಸ್ತರಣೆ ಮಾಡಲಾಗಿದೆ. ಸದ್ಯ ಕಾಮಗಾರಿ ಬಹುತೇಕ ಪೂರ್ಣವಾಗಿದ್ದು, ಇಲ್ಲಿ ಇಂದು ರೈಲು ಪ್ರಾಯೋಗಿಕ ಸಂಚಾರ ನಡೆಸಿದವು.🚇 : ( - ) 17 (11:40am - 6pm). - 25 .@ ://./ZI16X6vp9V ../Vt2G9pluk6ಈ ಕುರಿತು ಎಕ್ಸ್ ನಲ್ಲಿ ಮಾಹಿತಿ ನೀಡಿದ ಬಿಎಂಆರ್‌ಸಿಎಲ್‌ ಅಧಿಕಾರಿಗಳು, " ರೀಚ್ 3ಸಿ ವಿಸ್ತ್ರತ ಮಾರ್ಗದ ಮಾದವರ ಮತ್ತು ನಾಗಸಂದ್ರ ನಡುವೆ ಮೊದಲ ಪರೀಕ್ಷಾರ್ಥ ಸಂಚಾರ ನಡೆಸಲಾಗುತ್ತಿದೆ. 6 ಬೋಗಿಗಳ ರೈಲು ಕನಿಷ್ಠ 5 ಕಿ.ಮೀ ವೇಗದಿಂದ ಗರಿಷ್ಠ 35 ಕಿ.ಮೀ ವೇಗದಲ್ಲಿ ಚಲಿಸಿ ಪರೀಕ್ಷೆ ನಡೆಸಲಾಯಿತು " ಎಂದು ತಿಳಿಸಿದ್ದಾರೆ. ಅಲ್ಲದೆ ರೈಲುಗಳ ಸಂಚಾರದ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. - 17th 6- 25 . 3.17 # ( ) : @ ../rDI9yg76fF